ಮುಖಪುಟ  | ಪ್ರೊಫೈಲ್ | ಆರ್ಟಿಐ| ಜಿಲ್ಲಾ ನಕ್ಷೆಗಳು | ಪ್ರಮುಖ ಸಂಪರ್ಕಗಳು | ಸಂಪರ್ಕಿಸಿ |
ಪ್ರವಾಸೋದ್ಯಮ >> ಚಿಕ್ಕಬಳ್ಳಾಪುರ
ಪ್ರವಾಸಿ ತಾಣಗಳು
ನಂದಿಬೆಟ್ಟ

ಬೆಂಗಳೂರಿನಿಂದ 60 ಕಿ.ಮೀ. ಉತ್ತರಕ್ಕೆ ನಂದಿಬೆಟ್ಟ ಇರುತ್ತದೆ. ಈ ಬೆಟ್ಟವನ್ನು ಹಿಂದೆ ನಂದಿದುರ್ಗ ಎಂದು ಕರೆಯುತ್ತಿದ್ದರು. ನಂದಿಬೆಟ್ಟವು ಸಮುದ್ರ ಮಟ್ಟದಿಂದ 1478 ಮೀ ಮೇಲೆ ಇರುತ್ತದೆ. ಈ ಗಿರಿಧಾಮದಲ್ಲಿ ಟಿಪ್ಪು ಸುಲ್ತಾನ್ ಬೇಸಿಗೆ ಅರಮನೆ ಇದ್ದು, ಅವನು ಮತ್ತು ಅವನ ತಂದೆ ಹೈದರ್ ಅಲಿ ಇಲ್ಲಿ ಅವಳಿ ಕೋಟೆಗಳು ನಿರ್ಮಿಸಿರುತ್ತಾರೆ. ಇದೇ ಕೋಟೆಗಳನ್ನು ಸ್ಥಳೀಯ ಸಾಮಂತ ಮುಖ್ಯಸ್ಥರು ಕೂಡ ವಿಸ್ತರಿಸಿರುತ್ತಾರೆ. ಈ ಪ್ರದೇಶದ ಹಿತಕರ ವಾತಾವರಣದಿಂದ ಆಕರ್ಷಿತರಾಗಿದ್ದ ಬ್ರಿಟಿಷ್   ಅಧಿಕಾರಿಗಳು ಇಲ್ಲಿ ವಿಶಾಲವಾದ ಬಂಗಲೆಗಳು, ಉದ್ಯಾನವನಗಳನ್ನು ನಿರ್ಮಿಸಿದ್ದಾರೆ.  ಬೆಟ್ಟದ ಮೇಲಿರುವ ಟಿಪ್ಪು ಡ್ರಾಪ್ ಕೆಳಗೆ 60 ಮೀಟರ್ ಆಳವಾದ ಕಮರಿ ಇರುತ್ತದೆ. ಸಾಹಸ ಕ್ರೀಡಾ ಪ್ರೇಮಿಗಳು ಈ ಬೆಟ್ಟದ ಮೇಲಿರುವ ಪ್ರಾಚೀನ ಕಾಲದ ಯೋಗ ನಂದೀಶ್ವರ ದೇವಸ್ಥಾನದ ಪಕ್ಕದಿಂದ ಪ್ಯಾರಾಸೈಕ್ಲಿಂಗ್ ಗೆ ಪ್ರಯತ್ನಿಸಬಹುದು.


ಚಿಂತಾಮಣಿ

ಚಿಂತಾಮಣಿ ನಗರಕ್ಕೆ ಪ್ರಾಚೀನ ಕಾಲದ ಮರಾಠ ದಳವಾಯಿಯು ಚಿಂತಾಮಣಿ ಎಂದು ನಾಮಕರಣ ಮಾಡಿದ್ದಾರೆ. ಈ ನಗರದಲ್ಲಿದ್ದ ಚಿಂತಾಮಣಿ ರಾವ್ ಅವರ ಪ್ರಭಾವದಿಂದಲೂ ಈ ಹೆಸರು ಬಂದಿದೆ. ಈ ನಗರವು ಚಿನ್ನ ಮತ್ತು ಬೆಳ್ಳಿಯ ವ್ಯಾಪಾರ ಮತ್ತು ಅಗರಬತ್ತಿ (ಧೂಪದ್ರವ್ಯ) ಉದ್ಯಮವು ಪ್ರಸಿದ್ಧವಾಗಿದೆ. ಚಿಂತಾಮಣಿ ನಗರದಿಂದ ಸುಮಾರು 8 ಕಿ.ಮೀ. ದೂರದಲ್ಲಿರುವ ಮುರಗಮಲ್ಲ ದರ್ಗಾ ಇದೆ. ಇದು ರಾಜ್ಯದ ಅತ್ಯಂತ ಹಳೆಯದಾದ ದರ್ಗಾಗಳಲ್ಲಿ ಒಂದಾಗಿದೆ. ಇಲ್ಲಿ ವಿಶೇಷವಾಗಿ ವಾರ್ಷಿಕ ಉರುಸ್ ಸಂದರ್ಭದಲ್ಲಿ ಸಾವಿರಾರು ಜನ ಎಲ್ಲಾ ಧರ್ಮಗಳ ಯಾತ್ರಾರ್ಥಿಗಳು ಶ್ರದ್ಧೆಯಿಂದ ಪಾಲ್ಗೂಳ್ಳುವುದು ಒಂದು ವಿಶೇಷ.


ಗುಮ್ಮನಾಯಕ ಕೋಟೆ

ಬಾಗೇಪಲ್ಲಿಯ ಪೂರ್ವ ದಿಕ್ಕಿಗೆ 16 ಕಿ.ಮೀ. ಅಂತರದಲ್ಲಿ ನೆಲೆಗೂಂಡಿರುವ ಗುಮ್ಮನಾಯಕನಕೋಟೆಯು ಸುಮಾರು 1350 ರಲ್ಲಿ ದಳವಾಯಿ ಗುಮ್ಮನಾಯಕ ಹಾಗೂ ಆತನ ಉತ್ತರಾಧಿಕಾರಿಗಳಿಂದ ನಿರ್ಮಾಣವಾಗಿರುತ್ತದೆ. ಇದು 150 ಅಡಿ ಏರುವ ಸುತ್ತಮುತ್ತಲಿನ ಗುಡ್ಡಗಾಡು ಪ್ರದೇಶದ ಮೇಲೆ ತನ್ನ ಕೋಟೆಯ ವೃತ್ತಾಕಾರದ ಬಂಡೆ ಗಮನ ಸೆಳೆದಿದೆ.


ರಂಗಸ್ಥಳ 

ಚಿಕ್ಕಬಳ್ಳಾಪುರ-ಗೌರಿಬಿದನೂರು ರಸ್ತೆಯಲ್ಲಿ ರಂಗಸ್ಥಳದಲ್ಲಿ ಸ್ಥಾಪಿಸಲ್ಪಟ್ಟಿರುವ ವಿಜಯನಗರ ಶೈಲಿಯಲ್ಲಿ ಭಗವಾನ್ ರಂಗನಾಥ (ವಿಷ್ಣು) ಒಂದು ಸುಂದರ ದೇವಾಲಯವು ನಿರ್ಮಾಣವಾಗಿರುತ್ತದೆ.

ಮುದ್ದೇನಹಳ್ಳಿ

ಒಬ್ಬ ದೂರದೃಷ್ಟಿ ಇಂಜಿನೀಯರ್, ರಾಜನೀತಿ ಮುತ್ಸದ್ದಿ ಮತ್ತು ಆಧುನಿಕ  ಕರ್ನಾಟಕ ರಾಜ್ಯದ ನಿರ್ಮಾತೃ ಸರ್ ಎಂ ವಿಶ್ವೇಶ್ವರಯ್ಯನವರ ಜನ್ಮಸ್ಥಳವಾಗಿದೆ. ಇವರ ಮನೆಯನ್ನು ವಸ್ತುಸಂಗ್ರಾಹಲಯವನ್ನಾಗಿ ರೂಪಿಸಿದ್ದು, ಪ್ರವಾಸಿಗರು ಭೇಟಿ ನೀಡಬಹುದು. ನಂದಿ ಗ್ರಾಮವು ಭೋಗ ನಂದೀಶ್ವರ ದೇವಾಲಯದ ನೆಲೆಯಾಗಿದೆ. ಈ ದೇವಾಲಯವು ದ್ರಾವಿಡ ವಾಸ್ತು ಶೈಲಿಯಿಂದ  ನಿರ್ಮಾಣವಾಗಿರುವ  ಒಂದು ಅತ್ಯುತ್ತಮ ಉದಾಹರಣೆಯಾಗಿದೆ.


ಕೈವಾರ 

ಮಹಾಭಾರತದಲ್ಲಿ ಏಕಚಕ್ರಪುರವೆಂದು ಪ್ರಸಿದ್ಧಿಯಾಗಿರುವ ಮತ್ತು ಪಾಂಡವರು ತಮ್ಮ ಅಜ್ಞಾತವಾಸದ ಸಮಯದಲ್ಲಿ ವಾಸಿಸಿದ್ದ ಸ್ಥಳವಾಗಿದೆ ಎಂಬುದು ಕೈವಾರ ನಗರದ ಹಿನ್ನೆಲೆ. ಪಾಂಡವ ಸಹೋದರರಲ್ಲಿ ಒಬ್ಬನಾದ ಭೀಮನು ಜನತೆಯನ್ನು ಹಿಂಸಿಸುತ್ತಿದ್ದ ಅಸುರನಾದ ಬಕಾಸುರನನ್ನು ಕೂಂದಿರುವ ಸ್ಥಳವಾಗಿದೆ. ಪುರಾಣಗಳಲ್ಲಿ ಇರುವಂತೆ ಕೈವಾರ ಬೆಟ್ಟದ ಸಮೀಪದ ಗುಹೆಯ ಸಮೀಪದಲ್ಲಿ ಶಿವರಾತ್ರಿ ಆಚರಣೆ ಸಂದರ್ಭದಲ್ಲಿ ರಕ್ತ ಹನಿಹನಿಯಾಗಿರುವ ರಾಕ್ಷಸನ ಕಳೇಬರವನ್ನು ಒಳಗೊಂಡಿರುತ್ತದೆ ಎಂಬ ನಂಬಿಕೆ ಇದೆ. ಕೈವಾರದ ಬಳಿ ಸಂಗೀತ ಕಾರಂಜಿಗಳಿರುವ  ಉದ್ಯಾನವನ  ಇದ್ದು, ಈ ಉದ್ಯಾನವನದಲ್ಲಿ 5 ಕುಟೀರಗಳಿದ್ದು, ಇವುಗಳನ್ನು ಪಂಚ ಪಾಂಡವರ ಹೆಸರಿನಲ್ಲಿರುತ್ತವೆ. ಇಲ್ಲಿ ಅಮರನಾರಾಯಣ ಮತ್ತು ಭೀಮೇಶ್ವರ ದೇವಾಲಯಗಳು ಹಾಗೂ ಯೋಗಿ ನಾರಾಯಣ ಆಶ್ರಮವು ಭೇಟಿ ಯೋಗ್ಯವಿರುವ ಸ್ಥಳಗಳಾಗಿವೆ.

ಟಿಪ್ಪುಡ್ರಾಪ್

ನಂದಿ ಬೆಟ್ಟದ ನೈಋತ್ಯ ಭಾಗದಲ್ಲಿರುವ ಒಂದು ಕಡಿದಾದ ಆಳವಾದ ಸ್ಥಳವನ್ನು ಟಿಪ್ಪು ಡ್ರಾಪ್ ಎಂದು ಹೆಸರಿಸಲಾಗಿದೆ. ಟಿಪ್ಪುವಿನ ಆಳ್ವಿಕೆಯಲ್ಲಿ ಮರಣ ದಂಡನೆಗೂಳಗಾದ ಖೈದಿಗಳನ್ನು ಈ ಜಾಗದಿಂದ ತಳ್ಳಿ ಸಾಯಿಸುತ್ತಿದ್ದರು.

ಜಕ್ಕಲಮಡುಗು ಡ್ಯಾಮ್ 

ಚಿಕ್ಕಬಳ್ಳಾಪುರ ನಗರಕ್ಕೆ 10 ಕಿ.ಮೀ. ದೂರದ ಕಣಿವೆ ಪ್ರದೇಶದಲ್ಲಿರುವ ಜಕ್ಕಲಮಡುಗು ಜಲಾಶಯವು ಚಿಕ್ಕಬಳ್ಳಾಪುರಕ್ಕೆ ಕುಡಿಯುವ ನೀರನ್ನು ಪೂರೈಕೆ ಮಾಡುವ ಮುಖ್ಯ ಮೂಲವಾಗಿದೆ.


ನೆಹರು ಅತಿಥಿ ಗೃಹ

ಪಂಡಿತ್ ಜವಾಹರಲಾಲ್ ನೆಹರೂ ರವರು ನಂದಿಗಿರಿಧಾಮ್ಕೆಕ ಭೇಟಿ ನೀಡಿ ತಂಗಿದ್ದರು. ಇವರ ಸ್ಮರಣಾರ್ಥ ನೆಹರು ಅತಿಥಿಗೃಹವನ್ನು ನಿರ್ಮಾಣ ಮಾಡಿದ್ದು, ಇದು ತೋಟಗಾರಿಕೆ ಇಲಾಖೆಯ ಕಾರ್ಯನಿರ್ವಹಣೆಯಲ್ಲಿ ಇರುತ್ತದೆ. 1986ರಲ್ಲಿ ಎರಡನೇ ಸಾರ್ಕ್ ಶೃಂಗಸಭೆ ನಡೆದಿರುವ ಸ್ಥಳವಾಗಿದೆ.


ಬೋಗನಂದೀಶ್ವರ ದೇವಾಲಯ

ನಂದಿ ಗ್ರಾಮದಲ್ಲಿ ಸುಮಾರು ಕ್ರಿ.ಸ.806 ರಲ್ಲಿ ನಿರ್ಮಾಣವಾಗಿರುವ ಬೋಗನಂದೀಶ್ವರ ದೇವಾಲಯವು ದ್ರಾವಿಡ ಶೈಲಿಯಲ್ಲಿದ್ದು, ರತ್ನಾವಳಿ ರಾಜವಂಶದ ಬಾಣನಿಂದ ನಿರ್ಮಿಸಲ್ಪಟಿರುತ್ತದೆ.   ಬೋಗನಂದೀಶ್ವರ ದೇವಾಲಯವು ಪ್ರಾಚೀನ ವಾಸ್ತುಶಿಲ್ಪಕ್ಕೆ ಹೆಸರಾಗಿದ್ದು, ಇದಕ್ಕೆ ಹೂಂದಿಕೊಂಡಂತೆ  ಶ್ರೀ ಅರುಣಾಚಲೇಶ್ವರ ದೇವಾಲಯವನ್ನು ಬಳಪದ ಕಲ್ಲಿನಿಂದ ನಿರ್ಮಿಸಲಾಗಿದೆ. ಈ ದೇವಾಲಯಗಳಲ್ಲಿ ಗಂಗ, ಚೋಳರು ಮತ್ತು ಹೊಯ್ಸಳ ವಾಸ್ತುಶೈಲಿಯನ್ನು ಕಾಣಬಹುದು.

ಶ್ರೀನಿವಾಸ ಸಾಗರ ಕೆರೆ

ಚಿಕ್ಕಬಳ್ಳಾಪುರ-ಗೌರಿಬಿದನೂರು ರಸ್ತೆಯಲ್ಲಿ ಸುಮಾರು 8 ಕಿ.ಮೀ. ಅಂತರದಲ್ಲಿರುವ ಒಂದು ಸುಂದರವಾದ ಜಲಾಶಯವಾಗಿದೆ.


ವಿಶ್ವೇಶ್ವರಯ್ಯ  ಸಮಾಧಿ

ಸರ್   ಎಂ.ವಿಶ್ವೇಶ್ವರಯ್ಯ  ರವರ ಸಮಾಧಿಯು ಚಿಕ್ಕಬಳ್ಳಾಪುರ ತಾಲ್ಲೂಕು, ಮುದ್ದೇನಹಳ್ಳಿಯಲ್ಲಿ ಇರುತ್ತದೆ.


ಪಾಪಾಗ್ಗಿ ಮಠ ಚಿಕ್ಕಬಳ್ಳಾಪುರ

ಚಿಕ್ಕಬಳ್ಳಾಪುರ ನಗರದ ಹೂರವಲಯದಲ್ಲಿ ಸ್ಕಂದಗಿರಿ ಬೆಟ್ಟಗಳ ಮಡಿಲಲ್ಲಿ ನಿರ್ಮಿಸಲ್ಪಟ್ಟಿರುವ  ಪಾಪಾಗ್ನಿ ಮಠವು ಒಂದು ಪ್ರಾಚೀನ ಕಾಲದ ಪುರಾತನ ವಾದ ಮಠವಾಗಿರುತ್ತದೆ.


ಯೋಗಿನಂಧೀಶ್ವರ  ದೇವಾಲಯ 

ನಂದಿ   ಗಿರಿಧಾಮದ ಶಿಖರದಲ್ಲಿ ನಿರ್ಮಾಣವಾಗಿರುವ ಯೋಗನಂದೀಶ್ವರ ದೇವಾಲಯವು  ದ್ರಾವಿಡನ್ ಮತ್ತು ಚೋಳ ಶೈಲಿಯ ವಾಸ್ತುಶಿಲ್ಪ ವಿನ್ಯಾಸವನ್ನು ಒಳಗೂಂಡಿದೆ. ಈ ದೇವಾಲಯದ ದ್ವಾರಪಾಲಕ ಪ್ರತಿಮೆಗಳನ್ನು ಶ್ರೀ ಕೇಷ್ಣದೇವರಾಯನು  ದಾನವಾಗಿ ನೀಡಿರುತ್ತಾನೆ. ದೇವಾಲಯದ ಹೊರ ಗೋಡೆಯ ಶಾಸನಗಳು ವಿವರಿಸಿರುವಂತೆ ಮೂಗಲರ  ಆಳ್ವಿಕೆಯಲ್ಲಿ ಈ ದೇವಾಲಯವನ್ನು ಸಾಂಭಾಜಿಯ ಮಗನಾದ  ಛತ್ರಪತಿ ಶಿವಾಜಿಯು ಆಕ್ರಮಿಸಿಕೊಂಡಿದ್ದನಂತೆ. ನಂದಿ ಗಿರಿಧಾಮದ ಕಾಲುನಡಿಗೆ ದಾರಿಯಲ್ಲಿ ಸುಮಾರು 1397 ರಲ್ಲಿ ದೇವರಾಯನು ವೀರಭಧ್ರ ದೇವಾಲಯವನ್ನು ನಿರ್ಮಿಸಿದ್ದು, ಈ ದೇವಾಲಯವು ಒಂದು ಅತ್ಯಂತ  ಅಪೂರ್ವ ಐತಿಹಾಸಿಕ ಸ್ಮಾರಕವಾಗಿದೆ.


ಸುರಸದ್ಮಗಿರಿ ಬೆಟ್ಟ-ಗುಡಿಬಂಡೆ

ಗುಡಿಬಂಡೆ ನಗರದ ಪಶ್ಚಿಮ ದಿಕ್ಕಿನಲ್ಲಿ ಸುರಸದ್ಮಗಿರಿ ಬೆಟ್ಟವು  ಇದೆ. ಈ ಐತಿಹಾಸಿಕ ಪ್ರದೇಶದಲ್ಲಿ ಆ ಕಾಲದ ಪಾಳ್ಯಾಗಾರ ಬೈರೇಗೌಡ ನು ಆಳುತ್ತಿದ್ದು, ಇಲ್ಲಿ ಕೋಟೆಯನ್ನು ಸಹ ನಿರ್ಮಿಸಿರುತ್ತಾನೆ.


   ಅಯ್ಯಪ್ಪ ದೇವಾಲಯ-ಚಿಕ್ಕಬಳ್ಳಾಪುರ


ಅಯ್ಯಪ್ಪ ದೇವಾಲಯ, ಚಿಕ್ಕಬಳ್ಳಾಪುರ
ಚಿತ್ರಾವತಿ ದೇವಾಲಯ ಚಿಕ್ಕಬಳ್ಳಾಪುರ


ಚಿತ್ರಾವತಿ ದೇವಾಲಯ, ಚಿಕ್ಕಬಳ್ಳಾಪುರ.
ಪುಷ್ಕರಣಿ  ನಂದಿ ಗ್ರಾಮ

ನಂದಿ ಗ್ರಾಮದ ಭೋಗನಂದೀಶ್ವರ ದೇವಾಲಯದ  ಒಳಭಾಗದಲ್ಲಿರುವ ಪುಷ್ಕರಣಿ.
 © ವಿಷಯ ನಿರ್ವಹಿಸುತ್ತದೆ ಸ್ವಾಧೀನಪಡಿಸಿಕೊಂಡನುಚಿಕ್ಕಬಳ್ಳಾಪುರ ಜಿಲ್ಲಾ ಆಡಳಿತ. ಹಕ್ಕುತ್ಯಾಗ ವಿನ್ಯಾಸ ಮತ್ತು ನ್ಯಾಷನಲ್ ಇನ್ಫರ್ಮ್ಯಾಟಿಕ್ಸ್ ಸೆಂಟರ್ ನಡೆಸಿದ್ದು